Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಇಷ್ಟಾಲಾಪ


ದಿಲ್ಲಿಯಿಂದ ಬಂದ ಹುಡುಗ

ಹಳ್ಳಿ ಹುಡುಗಿಗೆ ಕೇಳಿದ

ದೊಡ್ಡ ಬಂಗ್ಲೆ, ಉದ್ದ ಕಾರು

ಕೆಂಪು ಕೋಟೆ ಬಲ್ಲಿಯೆ?

ರಾಜಬೀದಿ, ಪಾರ್ಲಿಮೆಂಟು

ಎಲ್ಲ ಸ್ವಂತ ಅಲ್ಲಿಗೆ

ನಿನ್ನದೇನು ಚಿಕ್ಕ ಹಳ್ಳಿ

ಬರುವಿಯೇನು ದಿಲ್ಲಿಗೆ?


ನಮ್ಮ ಹಳ್ಳಿ ಚಿಕ್ಕದೇನು?

ನೀನು ಹೇಳುವ ದಿಲ್ಲಿಗೆ

ಹಚ್ಚ ಹಸಿರ ತೆಂಗು ಕಂಗು

ಗುಲಾಬಿ ಇದೆಯಾ ಮಲ್ಲಿಗೆ?

ಸ್ವಚ್ಛಬೀದಿ, ಶುಭ್ರ ಮೇಘ

ಎಲ್ಲ ಸ್ವಂತ ಇಲ್ಲಿಗೆ

ರೋಗ ರಹಿತ ಪ್ರಾಣವಾಯು

ಇಲ್ಲಿದೆ, ದಿಲ್ಲಿಯಲ್ಲೇನಿದೆ?


ತಲೆದೂಗಿದ ದಿಲ್ಲಿ ಹುಡುಗ

ಹಳ್ಳಿ ಬೆಡಗಿಯ ಮಾತಿಗೆ

ನನಗಿಷ್ಟ ನಿನ್ನ ನುಡಿಯು

ಬರುವಿಯಾ ನನ್ನ ಹೃದಯಕೆ?

ನಾಚಿ ಕೊಂಡ ಹಳ್ಳಿ ಹುಡುಗಿ

ಹೆಜ್ಜೆ ಹಾಕಿದಳು ದೂರಕೆ

ಪ್ರತಿಸ್ಪಂದನಗಳು

Re: ಇಷ್ಟಾಲಾಪ
ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ ನಗುವ ನಗಿಸುತ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ- ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ. ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’. ವಿಳಾಸ: http://nagenagaaridotcom.wordpress.com/ ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ. ನಗೆ ಸಾಮ್ರಾಟ್
ಹಕ್ಕು ನಿರಾಕರಣೆ