Welcome, Guest   [ Register | Sign In | Take a tour | Adult Filter: On ]

ಒಂದಿಷ್ಟು ಬಿಕ್ಕುಗಳು..


ಗೆಳೆಯ ಹೇಳಿದ್ದನಂದು
ಪ್ರೀತಿ ಹುಟ್ಟುತ್ತವೆ
ಕಣ್ಣುಗಳಲ್ಲಿ ನಿನ್ನ
ನಿಜ ಹೇಳಿದ್ದಾನೇನು
ನಂಗೆ ತಿಳಿದಿಲ್ಲ

ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ
ನಿರೀಕ್ಷೆಗಳ ಪುಟಗಳಲಿ
ಕಣ್ಣು ನೆಟ್ಟಿರುವಾಗ
ಕಂಬನಿಗಳು ಹುಟ್ಟುತ್ತವೆ
ಪ್ರೀತಿ ಹುಟ್ಟಿದ ಕಣ್ಣಿನಿಂದಲೇ..

ನಿನಗಾಗಿ ಈ ಹೃದಯ
ಎಂದು ನಾನವನಿಗೆ ಹೇಳಿದ್ದೆ
ಇರಲಿ ಬಿಡು ಗೆಳತಿ ಸಹೃದಯತೆ
ನಿನ್ನಲ್ಲಿಯೇ ಎಂದವನಾತ

ಹಿರಿಯ ಲೋಕದೊಳು
ಮನಸು ಕಿರಿದಾಗುತಿದೆ
ದ್ವೇಷ ಮತ್ಸರಗಳ ಜನರೆಡೆಯಲಿ
ಈಸಿ ಜೈಸಲು ಇರಲಿ ನಿನ್ನ ಪುಟ್ಟ
ಹೃದಯ ನಿನ್ನಲ್ಲಿಯೇ...

ಕಣ್ಣು ಹನಿಗೂಡಿತ್ತು
ಒಲ್ಲೆನೆಂದನಲ್ಲಾ ನನ್ನ ನಲ್ಲಾ
ಎಂದು ಬಿಕ್ಕಿದ್ದೆ
ನನ್ನ ಕಣ್ಣಿಗೆ ಕಣ್ಣಿಟ್ಟು
ಪಿಸು ಮಾತು ಹೇಳಿದ್ದ
ಲೋಕ ಬದಲಾಗಿದೆ
ಸ್ನೇಹಕ್ಕೂ ಬರುತ್ತಿದೆ ಕುತ್ತು
ಭದ್ರವಾಗಿರಿಲಿ ಈ ಪ್ರೀತಿ
ನಿನ್ನಲ್ಲಿಯೇ..ನನ್ನ ನೆನಪನು ಹೊತ್ತು.

ಹಕ್ಕು ನಿರಾಕರಣೆ