Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ರಾಜಕಾ'ರಣ'



ಲೋಕ ಸಭೆಯಲ್ಲಿಯೂ
ತೋರಿಸುತ್ತಾರೆ ಸಂಸದರು
ನೋಟುಗಳ ಕಂತೆ
ಲೋಕಸಭೆಯಲ್ಲವೇ ಇದು
ಅದೋ "ಕುರಿ ಸಂತೆ" ?

ನಾವೇನೋ ಆರಿಸಿದ್ದೇವು
ಅವರನ್ನು ದೇಶವನ್ನಾಳಲು
ಇವರಂತೂ ಹೊರಟಿದ್ದಾರೆ
ದೇಶವನ್ನು ಹೂಳಲು

ಲಂಚ, ಗಣಿ,ಧಣಿಯದ್ದೇ
ಇಲ್ಲಿ ಕಾರುಬಾರು
ಕಾಣುವುದಿಲ್ಲ ಇವರಿಗೆ
ನಮ್ಮಂತಹ ಸಾಮಾನ್ಯರಾರು!

ದೇಶ ಹರಾಜಿನಲಿ, ಕೊಳ್ಳಲು
ಅಣಿಯಾಗಿದೆ ವಿದೇಶ ಮಾರುಕಟ್ಟೆ
ಬಡವ ಚಿತೆಯೇರಿರುವನು
ತುಂಬಲಾಗದೆ ತನ್ನ ಹೊಟ್ಟೆ!!

ಪ್ರತಿಸ್ಪಂದನಗಳು

Re: ರಾಜಕಾರಣ
ರಾಜಕಾರಣಿಗಳ ಕುರಿತು ತಾವು ಬರೆದ ಕವನ ಉತ್ತಮವಾಗಿದೆ. ರಾಜಕೀಯದ ಮತ್ತು ರಾಜಕಾರಣಿಗಳ ಬಗ್ಗೆ ಅಸಹ್ಯ ಇರುವ ಈ ವೇಳೆ ತಮ್ಮ ಕವನದಲ್ಲಿನ ವಿಚಾರ ನನ್ನ0ತಹ ನೂರಾರು ಜನರ ಬಾವನೆಯನ್ನು ಪ್ರತಿದ್ವನಿಸಿದೆ. ತುಂಬಾ ವಂದನೆಗಳು. ಇದೇ ರೀತಿ ವಾಸ್ತವವಾಗಿ ಬರೆಯುವುದನ್ನು ಮುಂದುವರೆಸಿ. ಇಂತಿ ವಿವೇಕ್
Re: ರಾಜಕಾರಣ
ವಿವೇಕ್ ಅವರೇ, ನಮಸ್ಕಾರ. ನಿಮ್ಮ ಪ್ರೋತ್ಸಾಹವೇ ನಮ್ಮಂತವರಿಗೆ ಉತ್ತಮ ಕವಿತೆಗಳನ್ನು ಬರೆಯಲು ಪ್ರೇರೇಪಿಸುತ್ತದೆ. ನಿಮ್ಮ ನೆಚ್ಚಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಇತೀ, ರಶ್ಮಿ
ಹಕ್ಕು ನಿರಾಕರಣೆ